ಶನಿವಾರ, ಆಗಸ್ಟ್ 27, 2011

ಒಂಟಿತನ..



- ಎಂ. ಎಸ್. ರುದ್ರೇಶ್ವರಸ್ವಾಮಿ.
ಒಂಟಿತನ
ಅವಳೀಗ ಬೆಳಕಿಗೆ ಮುಖ-
ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ.
ಬೆಳಕೆಂದರೆ ಅವಳಿಗೆ ಭಯ
ಸಾಕೆನಿಸಿದೆ ಅವಳಿಗೆ ಬೆಳಕಿನ
ಸದ್ದು ಸಂಭ್ರಮ ಹೊಸಹುಟ್ಟು
ಅವಳ ಪಾಡು ಅವಳಿಗೆ.
ಯಾರಿಗೂ ಬೇಕಿಲ್ಲದ
ನಡುಪ್ರಾಯದ ಅವಳಿಗೆ
ನಡುಕ, ಕದ್ದುಮುಚ್ಚಿ ಬೆಳಕು
ಒಳಗೆ ಬರಬಹುದೆಂದು. ಅದಕ್ಕೆ
ಅವಳೀಗ ಕಿಟಕಿ ಬಾಗಿಲು
ಮುಚ್ಚಿಟ್ಟಿರುತ್ತಾಳೆ. ರಾತ್ರಿಯ
ಮಾತು ಬೇರೆ. ದೂರದ ನಕ್ಷತ್ರ
ಕಟ್ಟುವುದು ಕಷ್ಟ ಸಂಬಂಧ.
ಕತ್ತಲ ಜೊತೆ ಮಾತಿಲ್ಲದ
ಸಂವಾದ ನಡೆಸುತ್ತಾಳೆ. ಕತ್ತಲು
ಅವ್ವನಂತೆ, ತಣ್ಣನೆಯ ಪ್ರೀತಿ.
ತೊಡೆ ಮೇಲೆ ತಲೆ ಇಟ್ಟು,
ಮಲಗುತ್ತಾಳೆ. ಒಂಟಿತನದ
ಕಣ್ಣೀರು, ನಸಕು ಹರಿಯುವ
ತುಸು ಮುಂಚೆ, ಮುಗ್ಢತೆ
ಪರಿಶುದ್ಧತೆಯ ಪಾರಿಜಾತ-
ಹೂವಾಗಿ ಚೆಲ್ಲಿದೆ ಗಿಡ-
ದಡಿಯಲ್ಲಿ ಘಮ ಘಮಿಸುವ
ಪರಿಮಳ.
ಯಾರಿಗೂ ಸೇರದೆ
ಎಲ್ಲವೂ ತನ್ನೊಳಗಿದ್ದಂತೆ

ಸೋಮವಾರ, ಆಗಸ್ಟ್ 22, 2011

ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ……..

ಅಮೃತಾ ಪ್ರೀತಂ
ಮೂಲ ಪಂಜಾಬಿ;
ಇಂಗ್ಲೀಷಿಗೆ: ನಿರುಪಮಾ ದತ್ತ
ಕನ್ನಡಕ್ಕೆ: ಉದಯ್ ಇಟಗಿ
(ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.)
-
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ
ಎಲ್ಲಿ ಮತ್ತು ಹೇಗೆ? – ನನಗೆ ಗೊತ್ತಿಲ್ಲ.
ಬಹುಶಃ, ನಾನು ನೀನು ಬಿಡಿಸುವ ಚಿತ್ರಕ್ಕೆ
ಕಲ್ಪನೆಯ ವಸ್ತುವಾಗಬಹುದು.
ಅಥವಾ ನಿನ್ನ ಕ್ಯಾನ್‍ವಾಸ್ ಮೇಲೆ
ನೀನೆ ಬಿಡಿಸಿಟ್ಟ ನಿಗೂಢ ಗೆರೆಗಳೆಲ್ಲೆಲ್ಲೋ ಅಡಗಿಕೊಂಡು
ನಿಧಾನವಾಗಿ ಕ್ಯಾನ್‍ವಾಸ್ ತುಂಬಾ ಹರಡಿಕೊಂಡು
ನಿನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಳ್ಳಬಹುದು.
ಪ್ರಾಯಶಃ, ನಾನೊಂದು ಸೂರ್ಯ ರಶ್ಮಿಯಾಗಿ
ನಿನ್ನ ಬಣ್ಣಗಳ ಆಲಿಂಗನದಲ್ಲಿ ಕಳೆದುಹೋಗಬಹುದು.
ಇಲ್ಲವೇ ನಿನ್ನ ಕ್ಯಾನ್‍ವಾಸ್ ಮೇಲೆ
ನಾನೇ ಬಣ್ಣ ಬಳಿದುಕೊಂಡು
ಒಂದು ಚಿತ್ರವಾಗಿ ಮೂಡಬಹುದು.
ಒಟ್ಟಿನಲ್ಲಿ ಖಂಡಿತ ನಿನ್ನ ಸಂಧಿಸುತ್ತೇನೆ
ಆದರೆ ಹೇಗೆ ಮತ್ತು ಎಲ್ಲಿ? – ನನಗೆ ಗೊತ್ತಿಲ್ಲ.
ಬಹುಶಃ, ನಾನೊಂದು ನೀರಿನ ಬುಗ್ಗೆಯಾಗಬಹುದು.
ಬುಗ್ಗೆಯಾಗಿ ಅದರಿಂದ ಉಕ್ಕುವ
ನೊರೆನೊರೆ ನೀರಿನ ಹನಿಗಳನ್ನು
ನಿನ್ನ ಎದೆಯ ಮೇಲೆ ಚಿಮುಕಿಸಿ ಉಜ್ಜುತ್ತೇನೆ.
ಉಜ್ಜುತ್ತಾ ಉಜ್ಜುತ್ತಾ ನಿನ್ನನ್ನು ನನ್ನೆದೆಗೆ ಒತ್ತಿಕೊಂಡು ಮುತ್ತಿಡುತ್ತೇನೆ
ನನಗೆ ಇದು ಬಿಟ್ಟರೆ ಬೇರೇನೂ ಗೊತ್ತಿಲ್ಲ
ಏನಾದರಾಗಲಿ, ನಾನು ನಿನ್ನೊಂದಿಗಿರುತ್ತೇನೆ.
ಈ ದೇಹ ಹೋದರೆ
ಎಲ್ಲವೂ ಹೋದಂತೆ.
ಆದರೆ ಅದರೊಂದಿಗೆ ಹೆಣೆದುಕೊಂಡ
ನೆನಪಿನ ದಾರದುಂಡೆಗಳು
ಮತ್ತೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳತೊಡಗುತ್ತವೆ.
ನಾನು ಆ ಎಳೆಗಳನ್ನೆ ಹಿಡಿದುಕೊಂಡು
ಮತ್ತೆ ದಾರದುಂಡೆಗಳನ್ನಾಗಿ ಸುತ್ತುತ್ತೇನೆ.
ಸುತ್ತುತ್ತಾ ಸುತ್ತುತ್ತಾ ಅಲ್ಲಿ ನಿನ್ನ ಕಾಣುತ್ತೇನೆ.
ಆ ಮೂಲಕ ಮತ್ತೆ ನಿನ್ನನ್ನು ಬಂದು ಸೆರುತ್ತೇನೆ..

ಹನಿಗಳು




ಬೆಳಗಾಯಿತೆಂಬ
ಸಂಭ್ರಮ
ಕತ್ತಲಲ್ಲಿ ಬೆಳಕಾದ
ಹಣತೆಗಳ ಆರಿಸುವುದು ..!

ಹೂ
ಗಿಡದಿಂದ
ಉದುರಿಬಿದ್ದರೇನಾಯ್ತು .../
ಗಾಳಿ ಹೊತ್ತೊಯ್ದ
ಗಂಧದಲಿ ಬದುಕುವುದು ..!

ಕಣ್ಣೆದುರಿನ ಕತ್ತಲನು
ಇಂಚಿಂಚಾಗಿ ನುಂಗದೆ
ಬೆಳಕಾಗಲು ಬರದು ...
ಆ ಸೂರ್ಯ
ಕಲಿತ ಪಾಠ
ಇಷ್ಟೇ ..!

ಇಳಿಬಿದ್ದ ಬೇರುಗಳೇ
ಗಟ್ಟಿ ಇರಲಿಲ್ಲ
ಆದರೂ ನಿನಗಿರುವುದು
ಗಾಳಿಯ ಮೇಲಷ್ಟೇ ಅಪಾದನೆ ..!

ಕತ್ತಲಾಗದಿದ್ದರೆ
ಏನಾಗುತ್ತಿತ್ತು ..?
ಏನಿಲ್ಲ
ಬೆಳಕು ಅಗ್ಗವಾಗಿಯೇ
ಉಳಿದು ಹೋಗುತ್ತಿತ್ತು

ನಿನ್ನ ಹಾಗೆ
ಮುಗಿಲು ಕಣ್ಣು
ತೆರೆಯಿತು
ಹೊರಗೂ ಬೆಳಕಾಯಿತು ...!

ಹಗಲಿಡೀ
ಎಷ್ಟೊಂದು ಬೆಳಕಿತ್ತು
ಆದರೇನು ...?
ಬಗ್ಗಿ ಒಂದಿಷ್ಟನ್ನೂ
ಎತ್ತಿಕೊಳ್ಳಲಾಗದು ...!

ನಿನಗೆ
ಹಗಲು ತೊಡಿಸಿದ
ಬಟ್ಟೆಗಳನು
ಇರುಳು ಬಿಚ್ಚಿಡಿಸಿತು
ಬೆಳಕು ಮಾತ್ರ
ಹಾಗೇ ಉಳಿಯಿತು ..!

ನೀನು ಕಣ್ಣು
ತೆರೆದರಷ್ಟೇ ಬೆಳಕು
ಆರಂಭದ ಪಾಠದ
ಅಕ್ಷರಗಳು
ಹೆಚ್ಚೆನಿರುವುದಿಲ್ಲ ...!
೧೦
ನೀ
ಒಳಗಿರುವಷ್ಟು ಹೊತ್ತು
ಬೆಳಕು
ಅನಾದಿಯೇ ...!
೧೧
ಕತ್ತಲೆಯಿದ್ದರೆ
ಸೂರ್ಯನಿದ್ದು ಹೋದ ಮನೆಯಲ್ಲಿ
ಮಿಂಚು ಹುಳುವೂ
ಗುರ್ತಿಸಲ್ಪಡುವುದು...!
೧೨
ಬೆಳಕಲ್ಲ
ಕತ್ತಲು
ಹಣತೆ ಹಚ್ಚುವುದ
ಕಲಿಸಿತು ...!
೧೩
ಕತ್ತಲಾಯಿತೆಂದೇ
ಹಣತೆಯಾಗುವ ಅವಕಾಶ
ಕೆಲವರಿಗಾದರೂ ಸಿಕ್ಕಿತು ..!

-ಅನಾಮಿಕc


ಬೆಳಗಾಯಿತೆಂಬ
ಸಂಭ್ರಮ
ಕತ್ತಲಲ್ಲಿ ಬೆಳಕಾದ
ಹಣತೆಗಳ ಆರಿಸುವುದು ..!

ಹೂ
ಗಿಡದಿಂದ
ಉದುರಿಬಿದ್ದರೇನಾಯ್ತು .../
ಗಾಳಿ ಹೊತ್ತೊಯ್ದ
ಗಂಧದಲಿ ಬದುಕುವುದು ..!

ಕಣ್ಣೆದುರಿನ ಕತ್ತಲನು
ಇಂಚಿಂಚಾಗಿ ನುಂಗದೆ
ಬೆಳಕಾಗಲು ಬರದು ...
ಆ ಸೂರ್ಯ
ಕಲಿತ ಪಾಠ
ಇಷ್ಟೇ ..!

ಇಳಿಬಿದ್ದ ಬೇರುಗಳೇ
ಗಟ್ಟಿ ಇರಲಿಲ್ಲ
ಆದರೂ ನಿನಗಿರುವುದು
ಗಾಳಿಯ ಮೇಲಷ್ಟೇ ಅಪಾದನೆ ..!

ಕತ್ತಲಾಗದಿದ್ದರೆ
ಏನಾಗುತ್ತಿತ್ತು ..?
ಏನಿಲ್ಲ
ಬೆಳಕು ಅಗ್ಗವಾಗಿಯೇ
ಉಳಿದು ಹೋಗುತ್ತಿತ್ತು

ನಿನ್ನ ಹಾಗೆ
ಮುಗಿಲು ಕಣ್ಣು
ತೆರೆಯಿತು
ಹೊರಗೂ ಬೆಳಕಾಯಿತು ...!

ಹಗಲಿಡೀ
ಎಷ್ಟೊಂದು ಬೆಳಕಿತ್ತು
ಆದರೇನು ...?
ಬಗ್ಗಿ ಒಂದಿಷ್ಟನ್ನೂ
ಎತ್ತಿಕೊಳ್ಳಲಾಗದು ...!

ನಿನಗೆ
ಹಗಲು ತೊಡಿಸಿದ
ಬಟ್ಟೆಗಳನು
ಇರುಳು ಬಿಚ್ಚಿಡಿಸಿತು
ಬೆಳಕು ಮಾತ್ರ
ಹಾಗೇ ಉಳಿಯಿತು ..!

ನೀನು ಕಣ್ಣು
ತೆರೆದರಷ್ಟೇ ಬೆಳಕು
ಆರಂಭದ ಪಾಠದ
ಅಕ್ಷರಗಳು
ಹೆಚ್ಚೆನಿರುವುದಿಲ್ಲ ...!
೧೦
ನೀ
ಒಳಗಿರುವಷ್ಟು ಹೊತ್ತು
ಬೆಳಕು
ಅನಾದಿಯೇ ...!
೧೧
ಕತ್ತಲೆಯಿದ್ದರೆ
ಸೂರ್ಯನಿದ್ದು ಹೋದ ಮನೆಯಲ್ಲಿ
ಮಿಂಚು ಹುಳುವೂ
ಗುರ್ತಿಸಲ್ಪಡುವುದು...!
೧೨
ಬೆಳಕಲ್ಲ
ಕತ್ತಲು
ಹಣತೆ ಹಚ್ಚುವುದ
ಕಲಿಸಿತು ...!
೧೩
ಕತ್ತಲಾಯಿತೆಂದೇ
ಹಣತೆಯಾಗುವ ಅವಕಾಶ
ಕೆಲವರಿಗಾದರೂ ಸಿಕ್ಕಿತು ..!

-ಅನಾಮಿಕ

ಶನಿವಾರ, ಆಗಸ್ಟ್ 20, 2011

ಕವಿ ಗುಲ್ಜಾರ್...



 ುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ. ಒಂದೇ ಕವಿತೆ ಕೇಳಿದ್ರೆಸಾಕು..ಗುಲ್ವಾರ್ ಮನಕ್ಕಿಳಿದು ಬಿಡುತ್ತಾರೆ.

ವಯಸ್ಸು ಅದೆಷ್ಟೋ ಆದ್ರೂ ಕವಿತೆ ಉಗಮಿಸೋ ಮನಸ್ಸು ಇನ್ನು ಜವಾನ್ ಹೈ...ಇನ್ನ ಸ್ಪಷ್ಟ ದೃಷ್ಟಿಕೋನ ಇಟ್ಟುಕೊಂಡಿದೆ ಹೊಸ ಪ್ರಯೋಗಗಳಿಗೆ ತೆರೆದು ಕೊಳ್ಳುತ್ತದೆ.


ಕವಿ
ಗುಲ್ಜಾರ್ ಆಗಿನಿಂದಲೂ ಬರೀತಾ ಇದ್ದಾರೆ. ಈಗಲೂ ಗುಲ್ಜಾರ್ ಉತ್ಸಾಹ ನಿಲ್ಲುವ ನಿಶಾನೆ ತೋರುತ್ತಿಲ್ಲ. ಸಾಗುತ್ತಲ್ಲೇ ಇದೆ ಭಾವಾಲೋಕದಲ್ಲಿ...


ಗುಲ್ಜಾರ್
ಕವಿತೆ ಇತ್ತೀಚಿನ ಇಸ್ಕಕೀಯಾ ಸಿನಿಮಾದಲ್ಲೂ ಇದ್ದವು.`ದಿಲ್ ಥೋ ಬಚ್ಚಾ ಹೈ ಜೀ' ಅಂತಲೇ ವಯಸ್ಸಿನಲ್ಲೂ ಚಂಚಲ ಮನದ ಮಸ್ತಿ ಬರೆದಿದ್ರು. ದಿಲ್ ಸಾ ಕೋಯಿ ಕಮೀನಾ ನಹೀ ಅಂದವರೂ ಇದೇ ಗುಲ್ಜಾರ್...


ಇದೇನೋ ಸಿನಿಮಾ ಮಾತಾಯಿತು. ತೆರೆ ಹಿಂದೆ ಗುಲ್ಜಾರ್ ಕವಿತಾ ಪ್ರೀಯರು ಸಾಕಷ್ಟು ಜನ. ಅದಕ್ಕೋ ಏನೋ...ಯು ಟ್ಯೂಬ್ ನಲ್ಲಿ ಗುಲ್ಚಾರ್ ಪೊಯೆಟ್ರಿ ಅಂತ ಬರೆದು ಕೀ ಬೋರ್ಡ್ ಎಂಟರ್ ಕೀ ಹೊಡೆದ್ರೆ ಆಯಿತು. ಸಾಲು..ಸಾಲು ಗುಲ್ಚಾರ್ ಕವಿತೆಗಳು ಸಿಗುತ್ತವೆ. ಅವರೇ ಹೇಳಿದ ಕವಿತೆ ಒಂದಷ್ಟು ತುಣುಕು ಇಲ್ಲಿವೆ...ಅವುಗಳನ್ನ ತರ್ಜುಮೆ ಮಾಡೋ ಪುಟ್ಟ ಪ್ರಯತ್ನ ಮಾಡಿದ್ದೇನೆ..


ನೀ ಧರೆಗಿಳಿಸಿದ ದಿನ

ತೋಟದಲ್ಲಿ ಈಗಲೂ

ಖಾಯಂ ಆಗಿದೆ...


ರಂಗು
ಮಾಸಿಲ್ಲ..

ದಿನವೂ ಕೆಟ್ಟು ಹೋಗಿಲ್ಲ.

ನೀ ಬಿಟ್ಟು ಹೊದಂತೇನೆ ಇದೆ.

ಇಲ್ಲಿ
ಬರೋ ಅಳಿಲಿಗೆ

ಈಗೀಗ ನಾನೂ ನಿನ್ನಂತೆ

ಬಿಸ್ಕತ್ ತಿನಿಸುತ್ತೇನೆ...

ಆದ್ರೂ, ಅಳಿಲು ನನ್ನ

ಅನುಮಾನಿಸುತ್ತವೆ.

ಅವು ನಿನ್ನ ಇನ್ನು

ಮರೆತಿಲ್ಲವೋ ಏನೊ..


ದಿನದ
ಸ್ಕಾರ್ಪ್ ತೆಗೆದು

ಹಾಕುತ್ತೇನೆ. ನೀ ಬಿಟ್ಟು

ದಿನದ ನೆನಪನ್ನು ಧರಿಸಿ

ಕೊಂಡು ಜೀವಿಸುತ್ತೇನೆ....
ಜೀವಿಸುತ್ತಿದ್ದೇನೆ....


ಇಂತಹ
ಕವಿತೆಗಳು ಹಲವು ಇವೆ. ಒಂದಕ್ಕಿಂತ ಒಂದು ವಿನೂತನ. ಭಾವ ಪರವಶರಾಗುವ ಮನಸಿದ್ದರೆ ಆಯಿತು. ಕವಿ ಗುಲ್ಚಾರ ಕವನಗಳು ಮೈ..ಮನ ಆವರಿಸಿಕೊಳ್ಳುತ್ತವೆ. ಹೊಸ ಉತ್ಸಾಹ...ಹೊಸ ಹುಮ್ಮಸ್ಸು ಮೂಡುತ್ತದೆ...ಅದಕ್ಕೇ ಗುಲ್ಜಾರ್ ಹೇಳಿರಬೇಕು... ನೋವು....ಬಹಳ ದಿನದ್ದಲ್ಲ ಅಂತ...ಹೌದು..! ಕವಿತೆಯೊಂದರ ಸಾಲುಗಳಲ್ಲಿ ಗುಲ್ಚಾರ ಮಾತು ಹೇಳಿದ್ದಾರೆ. ಅದರ ತಾತ್ಪರ್ಯ ಥರ ಇದೆ...


ನೋವು ಕೆಲವೇ ಕ್ಷಣದ್ದು..

ಅದಕ್ಕೆ ಅಷ್ಟೊಂದು ಶಕ್ತಿಯಿಲ್ಲವೇ ಇಲ್ಲ...

ಬಂದು ಹೋಗುತ್ತದೆ..ಬಂದು ಕಾಡುತ್ತದೆ

ಅಷ್ಟೆ. ಚಿಂತಿಸಬೇಕಿಲ್ಲ ಅಂತಾರೆ...


ಥರ ಗುಲ್ಚಾರ್ ಕವಿತೆಗಳಿಂದ ಕಾಡುತ್ತಾರೆ. ವಿಶಿಷ್ಟ ಕಂಚಿನ ಕಂಠದಿಂದ ಆಕರ್ಷಿಸುತ್ತಾರೆ. ಅದೆಷ್ಟೋ ಜನಕ್ಕೆ ಗುಲ್ಚಾರ್ ಚಿರಪರಚಿತ. ನನಗೆ ಈಗಷ್ಟೆ ಮನದಲ್ಲಿ ಇಳಿದಿದ್ದಾರೆ...


-ರೇವನ್

ಬರುವಿರಾ, ಹಳೆಯ ಹೆಜ್ಜೆಗಳು ಕರೆದಾಗ...



ಬಿಟ್ಟು ಹೋದ ಹೆಜ್ಜೆಗಳನು ಮತ್ತೆ ಹೆಕ್ಕಲು ಬಂದಾಗ

ಬಿತ್ತಿದ ಬೀಜ ಮರವಾಗಿತ್ತು 
ಮರದ ನೆರಳಲಿ ಹೆಜ್ಜೆಗಳು ಮರೆಯಾಗಿ
ಕಲ್ಲಿನ ಶಿಖರವಾಗಿತ್ತು

ಎಲ್ಲೆಲ್ಲೋ ಅಲೆದು ಏನೇನೋ ಅಳೆದು
ಮುಷ್ಟಿಯೊಳಗಿನ ಮುತ್ತನು ಹಿಡಿದುಕೊಂಡು
ಬಿಟ್ಟು ಹೋದ ಹೆಜ್ಜೆಗಳ ಕಾಲುಗಳಿಗೆ 
ಗೆಜ್ಜೆ ಕಟ್ಟಿ ಕುಣಿಯಲೆಂದು ಬಂದರೆ

ಅಲ್ಲಿ ಪಾರ್ತಿಸುಬ್ಬನ ಪದ್ಯಗಳನು
ಯೂ ಟ್ಯೂಬ್ ನೊಳಗಿಟ್ಟ 
ಭಾಗವತರ ಬೋಳು ಮಂಡೆಗೆ ಮುಂಡಾಸು ಏರಿದೆ
ಕತ್ರಿನಾಳ ಶೀಲಾ ಕಿ ಜವಾನಿಯ ನೆನಪಲ್ಲಿ

ಇನ್ನೊಮ್ಮೆ ಸಿಗುವೆ ಎಂದು ವಾಗ್ದಾನ ನೀಡಿದ
ಮಾವಿನ ಮರದ ಕರುಳ ನೆರಳು 
ಬಟಾ ಬಯಲಾಗಿದೆ ಅಂತಸ್ತುಗಳನು ಲೆಕ್ಕ ಹಾಕುತ್ತಾ
ಬಾನೆತ್ತರ ಎದ್ದು ನಿಂತ ಮಹಾ ಮಹಡಿಗಳೊಳಗೆ

ಮುದ್ದುಕಂಗಳ ಮುಗ್ದೆಯ ತುಟಿಯಂಚಿನ ಸಣ್ಣ
ಸ್ಪರ್ಶಕೆ ಮರೆತು ಹೋದ ತರಗತಿಯ ಪಾಠಗಳು
ವಾರನ್ ಬಫೆಟ್‍ನ ಉಪನ್ಯಾಸದ ಸೀ.ಡಿ.ಗಳಲಿ
ಷೇರು ಮಾರುಕಟ್ಟೆಯ ವ್ಯವಹಾರದ ಪಂಚಾಂಗವನು ಹಾಕಿದೆ


ಜಾರಿ ಬಿದ್ದು ಗುರುತಿಗೊಂದು ಶಾಶ್ವತ ಕಳೆಯನು 
ಕೊಟ್ಟ ಬಯಲ ಕಲ್ಲು
ಕರಗಿ ಹೋಗಿದೆಯೋ, ಉರುಳಿ ಹೋಗಿದೆಯೋ
ಅಲ್ಲ ಅಂಚಿನೊಳಗಿನ ಮಸಣದ ಗೋರಿಗೆ ಆಸರೆಯಾಗಿದೆಯೋ


ಮತ್ತೆ ಹೆಕ್ಕಲು ಬಂದಾಗ ಆ ಹಳೆಯ  ಹೆಜ್ಜೆಗಳೇನಾದರೂ
ಕರಿಬೂಟಿಗೆ ತಗುಲಿ ಅಪ್ಪಾ ಎಂದು ಕರೆದರೆ
ಹೆಗಲ ಮೇಲಿನ ಚೀಲದೊಳಗೆ ತುಂಬಲು, ಗೆಳೆಯರೇ
ನೀವ್ಯಾರಾದರೂ ಹೊರಟು ಬರುವಿರಾ 

ಅಂತಸ್ತಿನ ಕಟ್ಟಡದ ಮೂವತ್ತನೇ ಮಹಡಿಯಿಂದ
ಸುಂದರ ಸಂಜೆಯನೂ ನುಂಗಿದ ಮಧ್ಯಾಹ್ನದ ಮೀಟಿಂಗ್‍ನಿಂದ
ಒಂದೊಂದಿಂಚೂ ಮುಂದುವರಿಯದ ಮಾರ್ಗದೊಳಗಿನ ದಟ್ಟಣೆಯಿಂದ
ಸ್ಥಿತಿಯನು ವಿಸ್ತರಿಸುವ ಫೇಸ್‍ಬುಕ್ಕಿನ ಸ್ಟೇಟಸ್‍ನಿಂದ.

ಬಾನಾಡಿ

ಮಂಗಳವಾರ, ಆಗಸ್ಟ್ 16, 2011

ನಾವು ಕಂಡೇ ಕಾಣುತ್ತೇವೆ...

 

ಕಾಲದ ಅನಂತತೆಯ ಸ್ಲೇಟಿನ ಮೇಲೆ
ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ
ನಾವು ಕಂಡೇ ಕಾಣುತ್ತೇವೆ...

ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ
ರೌದಿಯಾಗಿ ಹಾರಾಡುವುದನ್ನು,
ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು
ನಾವು ಕಂಡೇ ಕಾಣುತ್ತೇವೆ...

ಎಲ್ಲ ಕಿರೀಟಗಳು, ಮುಕುಟಮಣಿಗಳು ಕಿತ್ತೆಸೆಯಲ್ಪಡುವುದನ್ನು,
ದರ್ಪದ ಸಿಂಹಾಸನಗಳೆಲ್ಲ ಸಮಾಧಿ ಸೇರುವುದನ್ನು
ನಾವು ಕಂಡೇ ಕಾಣುತ್ತೇವೆ...

ಸುಳ್ಳಾಡುವ ಮುಸುಡಿಗಳು ಮರೆಯಾಗಿ
ನಮ್ಮಂಥ ನಿರ್ಲಕ್ಷಿತ ಜೀವಂತ ಮುಖಗಳು
ನಿರಾಕರಿಸಲ್ಪಟ್ಟ ಗದ್ದುಗೆಗಳನೇರುವುದನ್ನು
ನಾವು ಕಂಡೇ ಕಾಣುತ್ತೇವೆ...

ನಾನೂ ಇರುವೆನಿಲ್ಲಿ, ನೀವೂ ಇರುವಿರಿ
ಇದೆಲ್ಲ ನಿಜವಾಗುವುದನ್ನು
ನಾವು ಕಂಡೇ ಕಾಣುತ್ತೇವೆ...

ಮೂಲ: ಫೈಜ್ ಅಹ್ಮದ್ ಫೈಜ್

ಕನ್ನಡಕ್ಕೆ: ದಿಲ್

ಸೋಮವಾರ, ಆಗಸ್ಟ್ 15, 2011

ಅಮೃತಾ ಪ್ರೀತಂ ಕವನ

ಮೈನೆ ಜಬ್ ತೆರಿ ಸೇಜ್
ಪರ್ ಪೈರ್ ರಖ್ಖಾ ಥಾ,
ಮೈ ಏಕ್ ನಹಿ ಥಿ, ದೊ ಥಿ.

ಏಕ್ ಸಮೂಚಿ ಬ್ಯಾಹಿ
ಔರ್ ಏಕ್ ಸಮೂಚಿ ಕಂವಾರಿ.
ತೆರಿ ಭೋಗ್ ಕಿ ಖಾತಿರ್
ಮುಝೆ ಉಸೆ ಕತ್ಲ್ ಕರ್ನಾ ಥಾ
ಮೈನೆ ಕತ್ಲ್ ಕಿಯಾ ಥಾ
ಪರ್ ಜ್ಯೂಂಹಿ ಮೈ ಶೀಶೇ ಕೆ
ಸಾಮನೆ ಆಯೀ,
ವಹ್ ಸಾಮನೆ ಖಡೀಥಿ
ವಹಿ ಜೊ ಅಪ್ನೆ ತರಫಸೆ ಮೈನೆ
ರಾತ್ ಕತ್ಲ್ ಕೀ ಥಿ
ಓ ಖುದಾಯಾ, ಕ್ಯಾ ಸೆಜ್ ಕಾ
ಅಂಧೇರಾ ಬಹುತ್ ಗಾಢಾ ಥಾ?
ಮುಝೇ ಕಿಸೇ ಕತ್ಲ ಕರನಾ ಥಾ
ಕಿಸೇ ಕತ್ಲ ಕರ್ ಭೈಠಿ.
ಕನ್ಯೆ
ಮೊದಲ ರಾತ್ರಿಯ ನಿನ್ನ ಮಧುಮಂಚಕೆ
ಬಂದಾಗ ನಾ ಒಬ್ಬಳಾಗಿರಲಿಲ್ಲ
ಎರಡಾಗಿದ್ದೆ.
ಒಬ್ಬ ಸಂಪೂರ್ಣ ವಿವಾಹಿತೆ
ಒಬ್ಬ ಸಂಪೂರ್ಣ ಕನ್ಯೆ.
ನಿನ್ನ ಭೋಗಕ್ಕಾಗಿ ನಾನು ಆಕೆಯನ್ನು
ಕೊಲ್ಲಬೇಕಿತ್ತು. ಕೊಂದೆ ಕೂಡಾ.
ಆದರೆ ನಾನು ಕನ್ನಡಿಯ
ಎದುರಿಸಿದಾಕ್ಷಣ
ಆಕೆ ಎದುರಿಗೆ ಬಂದಳು
ಅವಳೇ, ನಾನು ನಾನಾಗಿಯೇ
ರಾತ್ರಿ ಕೊಲೆಗೈದೆನಲ್ಲಾ ಅವಳೇ
ಓ ದೇವರೇ, ಮಧುಮಂಚದ ಕತ್ತಲು
ಅಷ್ಟು ದಟ್ಟವಾಗಿತ್ತೇ
ಯಾರ ಕೊಲೆ ಮಾಡಬೇಕಿತ್ತು ನಾನು
ಕೊಂದೆ ಯಾರನ್ನ?

ಅನುವಾದ  :  
-ಶ್ರೀಕಾಂತ್ ಪ್ರಭು

ಭಾನುವಾರ, ಆಗಸ್ಟ್ 14, 2011

You Are The One

 Shelley Reeder


Dreamer


Poem By: Shelley Reeder

ಶನಿವಾರ, ಆಗಸ್ಟ್ 13, 2011

ಹೂವಕಟ್ಟುವ ಕಾಯಕ



  • ಹೂವಕಟ್ಟುವ ಕಾಯಕ

    • ವೈದೇಹಿ 

    • ಅಬ್ಬಲಿಗೆ ಹಗುರಕ್ಕೆ ಸೇವಂತಿ ಜೊತೆ ಬೇಡ

      ಭಾರ ಜಗ್ಗಿ ಮಾಲೆ ತೂಕ ತಪ್ಪುತ್ತೆ

      ಆಚೆಗಿಡು ಅವುಗಳನು ಬೇರೆ ಕಟ್ಟು

      ಹೂವಾದರೇನು, ಒಂದನೊಂದು ಮರೆಸದ ಹಾಗೆ 

      ಆಯಬೇಕು ನೋಡು ಮೊತ್ತ ಮೊದಲು

      ಮಲ್ಲಿಗೆಯ ಜೊತೆಗೆ ಮಲ್ಲಿಗೆಯೆ ಸಮ ಕಣೆ

      ಇದ್ದರಿರಲಿ ಎರಡು ಪಚ್ಚೆಕದಿರು

      ದುಂಡುಮಲ್ಲಿಗೆ ಮರುಗ ಎಂದಿನಿಂದಲೂ ಒಂದು

      ಹೊಂದುವುದು ಜಾಜಿಯೂ ತಂಗಿಯಂತೆ

      ಕಾಕಡಾ ಮತ್ತು ಪಂಚಪತ್ರೆಯ ಜೋಡಿ

      ಮಾಲೆಯನು ಬಲುಬೇಗ ಉದ್ದ ಮಾಡಿ

      ಸ್ವಲ್ಪ ಹೂವಲೆ ದೊಡ್ಡ ಹಾರ ಕಟ್ಟಿದ ಲಾಭ

      ನೀಡುವುದು ಕಂಡೆಯ, ಸುಲಭದಲ್ಲಿ!

      ದಾಸವಾಳವೆ? ಇರಲಿ ಬಿಡಿಬಿಡೀ ಅದರಷ್ಟಕ್ಕೆ

      ಅರಳಿದರೆ ಬೇಕದಕೆ ಅಂಗೈಯಗಲ ಜಾಗ

      ಗುಲಾಬಿಗೋ ಕಟ್ಟಿದರೂ ಬಿಟ್ಟರೂ ಖೇರಿಲ್ಲ

      ಎಷ್ಟಂತಿ ಹಮ್ಮು, ಪಾಪ, ಮುಳ್ಳಿದ್ದರೂ!

      ಬಣ್ಣ ಬಣ್ಣದ ರತ್ನಗಂಧಿಯನು ಕೊಯ್ದು

      ತೊಟ್ಟುಗಳ ಹೆಣೆಯೋಣ ಕಡಿಯದಂತೆ

      ಸಂಜೆಮಲ್ಲಿಗೆ ವಿವಿಧ ಜುಟ್ಟುಜುಟ್ಟಿಗೆ ಗಂಟು

      ಕಸ್ತೂರಿತೆನೆಯ ಜೊತೆ ಕೇಪಳದ ಕೆಂಪು

      ಹಗ್ಗ ಹಂಗಿಲ್ಲದೆಯೆ ಹೆಣೆವ ಕ್ರಮವಿದೆ ಎಷ್ಟು

      ದಾರದಾಧಾರದಲೆ ಪೋಣಿಸುವವೆಷ್ಟು !

      ಕಟ್ಟಿದರೆ ಶಂಖಪುಷ್ಪ ನಿತ್ಯಪುಷ್ಪದಂಥವು

      ನಲುಗುವವು ಹಾn ಹೂ ಬುಟ್ಟಿಯಲ್ಲಿಡು, ಸ್ವಸ್ಥ

      ಇರಲಲ್ಲಿ ಅವು ಕಟ್ಟಿ ಅವುಗಳೊಳಗೇ ನಂಟು

      ನಮ್ಮದೇ ಮಾತು ಆಲಿಸುತ ನೋಡಿಲ್ಲಿ

      ಹೊತ್ತು ಹೋದದ್ದೇ ತಿಳಿಸದೆ

      ಕೈಯೊಳಗೆ ಕೈಯಿಟ್ಟು ಸಜಾjಗಿ ಶಿಸ್ತಾಗಿ

      ಮಾರುದ್ದ ಮಾಲೆಯಲಿ ಈ ಹೂಗಳು

      ಮೂರೆಳೆ ನಾಕೆಳೆ ಎರಡೆಳೆ ಒಂದೆಳೆ

      ದಾರ ಉದಾರ ಶೂನ್ಯಾಧಾರ ಸೂತ್ರದಲಿ

      ಯಾವ ಉದ್ದೇಶಕ್ಕೋ ಹೊರಟು ನಿಂತಿಹವು


      ಕಟ್ಟಿದ್ದು ನಾವು ಹೂವ ಮಾತ್ರವೆ ಏನು?

      ಕಲಿಸಿಲ್ಲವೆ ಅದು ಕಟ್ಟುವ ಪಾಠವನ್ನು

      ನಿತ್ಯವೂ ಹೊಸ ಹೂವು ನಿತ್ಯ ಹೊಸ ಕ್ಷಣದಂತೆ

      ನಿತ್ಯವೂ ಹೊಸ ಪಾಠ ಪುಟ ತೆರೆಯುವಂತೆ
      ಹೂ ಪತ್ರೆ ರಾಶಿಯಿದೆ ಕಟ್ಟೋಣ ಬಾ ಸಖೀ

      ಕರೆ ಅವಳನು ಅವನನೂ ಎಳೆಯರನೂ ಬೆಳೆಯರನೂ

      ಕಲಿಯೋಣ ಎಲ್ಲರೂ ಹೂವ ಕಟ್ಟುವುದನು

      ಕಟ್ಟುವ ಬಗೆ ಬಗೆಯ ಕಲೆ ಕಲಿಯೋಣ ಬಾ

      ಕಟ್ಟಿ ಮನದೇವರಿಗೆ ಸಲಿಸೋಣ ಬಾ

ಗದ್ದರ್ ಹಾಡು- ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ…









ರಕ್ಷಾ ಬಂಧನ, ಬಹುಶ: ರಕ್ತ ಸಂಬಂಧಯಿಲ್ಲದೆಯೂ ಒಂದು ಕಮ್ಮನೆಯ ಅಕ್ಕ-ತಂಗಿ, ಅಣ್ಣ-ತಮ್ಮ೦ದಿರ ಪ್ರೀತಿಯನ್ನು ಎಂಥವರಿಗೂ ಮೊಗೆದು ಕೊಡಬಹುದಾದ ಹಬ್ಬ. ಮತ್ತು ರಾಖಿ ಹಬ್ಬದ ಕುರಿತು ಈಗಾಗಲೇ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಬರೆಯಲಾಗಿದೆ. ಸಿನಿಮಾಗಳಲ್ಲಂತೂ ಎಕರೆಗಟ್ಟಲೆ ತೋರಿಸಲಾಗಿ ರಾಖಿ ಕಟ್ಟಿಸಿಕೊಂಡರೆ ಕಡ್ಡಾಯವಾಗಿ ಏನಾದರು ಗಿಫ್ಟ್ ಕೊಡಲೇಬೇಕೆಂಬ ಗೊತ್ತುವಳಿ ಒಂದು ಜಾರಿಯಾದಂತಿದೆ.
ಆದರೆ ದಶಕ ಹಿಂದೆ ತೆಲುಗುವಿನಲ್ಲಿ ಆರ್ ನಾರಾಯಣ ಮೂರ್ತಿ ನಿರ್ಮಿಸಿದ’ಓರಾಯ್ ರಿಕ್ಷಾ’ ಸಿನಿಮಾಕ್ಕೆ ಗದ್ದರ್ ಬರೆದ ‘ಮಲ್ಲೆ ತೀಗಕು ಪಂದಿರಿ ವೋಲೆ’ ಹಾಡು ಎಂಥ ಅಧ್ಬುತವಾಗಿ ಮೂಡಿ ಬಂದಿದೆ ಎಂದರೆ ಇವತ್ತಿಗೂ ರಕ್ಷಾ ಬಂಧನ ದಿವಸ ಆ ಹಾಡನ್ನು ಪ್ರಾರ್ಥನೆ ಗೀತೆ ಎಂಬಂತೆ ಜನ ಮತ್ತೆ ಮತ್ತೆ ಕೇಳುತ್ತಾರೆ.
ಒಬ್ಬ ಬಡ ರಿಕ್ಷಾ ತುಳಿಯುವ ಅಣ್ಣನ ನಿವೇದನೆ ಈ ಹಾಡು. ಜಾನಪದ ಸೊಗಡನ್ನು ಜನರ ಭಾಷೆಯಲ್ಲೇ ಹೆಣೆದು ಅವರನ್ನು ಎಚ್ಚರಗೊಳಿಸುವ ಅದೆಷ್ಟೋ ಗೀತೆ ರಚಿಸಿರುವ ಗದ್ದರ್ ಈ ಗೀತೆ ರಚನೆಗೆ ಆಂಧ್ರ ಪ್ರದೇಶದ ನಂದಿ ಅವಾರ್ಡ್ ಬಂದರು ಸ್ವೀಕರಿಸಲಿಲ್ಲ. ವಂದೇ ಮಾತರಂ ಶ್ರೀನಿವಾಸ್ ಹಾಡಿರುವ ಈ ಗೀತೆಯ ಭಾಷಾಂತರ ಇಲ್ಲಿದೆ.
ಕನ್ನಡಕ್ಕೆ : ರಮೇಶ ಅರೋಲಿ.

ಮಲ್ಲಿಗೆ ಬಳ್ಳಿಗೆ ಹಂದರ ವೋಲೆ
ಮಬ್ಬುಗತ್ತಲಲ್ಲಿ ಬೆಳದಿಂಗಳ ವೋಲೆ
ನಿನ್ನ ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮ
ಒಡ ಹುಟ್ಟಿದ ಋಣ ತೀರಿಸುವೆನೆ ತಂಗ್ಯಮ್ಮ
ಮೈನೆರೆದ ಮರು ಘಳಿಗೆಯಿಂದಲೆ
ಹೆಣ್ಣುಮಗು ಮೇಲೆ ಏಸೊಂದು ಎಣಿಕೆ
ಕಾಣುವುದೆಲ್ಲ ನೋಡದಿರೆ೦ದರು
ನಗುವ ಮಾತಿಗೂ ನಗಬೇಡೆ೦ದರು
ಅಂಥ ಅಣ್ಣ ನಾನಾಗಲಾರೆ ತಂಗ್ಯಮ್ಮ
ನಿನ್ನ ಬಾಲ್ಯಕಾಲದ ಗೆಳೆಯನಮ್ಮ ತಂಗ್ಯಮ್ಮ
ಕಾಡಿನೊಳಗೆ ನವಿಲು ವೋಲೆ ತಂಗ್ಯಮ್ಮ
ಆಟ ಆಡಿಕೋ ಹಾಡು ಹಾಡಿಕೋ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II
ಬಳಲಿ ಹೋಗಿ ನೀ ಕಳೆಗುಂದಿದ್ದರೆ
ಬೆನ್ನುಮೂಳೆ ಆಗಿ ಒಳ ಬಂದೆನಮ್ಮ
ಒಂದುಕ್ಷಣ ನೀ ಕಾಣದಿದ್ದರೆ
ನನ್ನ ಕಣ್ಣಾಲಿಗಳು ಕಮರಿ ಹೋದವು
ಒಂದು ಕ್ಷಣ ನೀ ಮಾತುಬಿಟ್ಟರೆ ತಂಗ್ಯಮ್ಮ
ನಾ ದಿಕ್ಕಿಲ್ಲದ ಹಕ್ಕಿಯಾದೇನೆ ತಂಗ್ಯಮ್ಮ
ತುತ್ತು ತಿನ್ನದೇ ಮುನಿಸಿಕೊಂಡರೆ ತಂಗ್ಯಮ್ಮ
ನನ್ನ ಭುಜಬಲವೇ ಬಿದ್ದು ಹೋದಿತೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II
ಓದಿದಷ್ಟು ನಿನ್ನ ಓದಿಸ್ತೀನಮ್ಮ
ಬೆಳೆಯುವಷ್ಟು ನಿನ್ನ ಬೆಳೆಸ್ತೀನಮ್ಮ
ಜೋಡೊಂದು ಕೂಡೋ ಹೊತ್ತಿಗೆ
ಹೂವೋ ಎಲೆಯೋ ಜೋಡಿಸ್ತಿನಮ್ಮ
ಮೆಚ್ಚಿದವಗೆ ಕೊಡುವೆ ನಿನ್ನ ತಂಗ್ಯಮ್ಮ
ನನ್ನ ಕಣ್ಣೀರಿಂದ ಕಾಲು ತೊಳೆಯುವೆ ತಂಗ್ಯಮ್ಮ
ರಿಕ್ಷಾ ಗಾಡಿಯ ತೇರು ಮಾಡುವೆ ತಂಗ್ಯಮ್ಮ
ನಿನ್ನ ಅತ್ತೆಮನೆಗೆ ಹೊತ್ತೊಯ್ಯುವೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ ಈ
- ನಿಮ್ಮ ಅಭಿಮತ ತಿಳಿಸಿ

ಜಟಾಯು ಪಕ್ಷಿಗೆ ಶ್ರದ್ಧಾಂಜಲಿ ಜ್ಯೋತಿ ಗುರುಪ್ರಸಾದ್

ಹದಿನಾಲ್ಕು ವರ್ಷ ಸಂಪೂರ್ಣ
ಮನದಿಚ್ಛೆಯ ನಲ್ಲನ ಜೊತೆ-ಜೊತೆಗೇ
ನಾರು ಮಡಿಯುಟ್ಟು ಹಣ್ಣು ಹಂಪಲು ಉಂಡು
ಪಕ್ಷಿ ಸಂಕುಲದ ಇಂಚರವ ಆಲಿಸಿ
ತನ್ನೆದೆಗೂಡ ಹಕ್ಕಿಗೆ ಓಗೊಟ್ಟ ಸೀತೆ
ಮಾಯೆ ತಿಳಿಯದೆ ಆ ಜಿಂಕೆಯ ಮೋಹಿಸಿಬಿಟ್ಟಳು
ಆ ಮೋಹವೂ-ಜಿಂಕೆಯ ಚೆಂದವೂ
ರಾಮನಿಗಿಂತ ಹೆಚ್ಚಾಗಿರಲಿಲ್ಲ; ಅವನಿಗಿಂತ ಹೊರತಾಗಿರಲಿಲ್ಲ
ರಾಮನೇಕೆ ಅರಿಯದೇ ಹೋದ?
ಸರಿ ಏನೇನೋ ಆಗಿ ಹೋಯಿತು.
ರಾವಣನ ಬಂಧು ಮಾರೀಚ ವಧೆಯಾಗುವುದರ ಜೊತೆಗೆ
ಮುಗ್ಧ ಮುದ್ದು ಜಟಾಯು ಪಕ್ಷಿಯೂ
ಸೀತೆಗಾಗಿ ಹೋರಾಡುತ್ತ ಪ್ರಾಣ ಒಪ್ಪಿಸಿಬಿಟ್ಟಿತು.
ಜಟಾಯು ಪಕ್ಷಿಗೆ ಶ್ರದ್ಧಾಂಜಲಿ
ಸಲ್ಲಿಸುವೋಪಾದಿಯಲ್ಲಿ ಇಂದು
ವಾಲ್ಮೀಕಿಯಾಶ್ರಮದಲ್ಲಿ ತನ್ನೆರಡು ಕಂದಗಳೊಡನೆ
ಮತ್ತದೇ ವನವಾಸದ ಜೀವನದಲ್ಲಿರುವ ಸೀತೆಗೆ ಮಾತ್ರ
ಪ್ರೇಮವೆಂದರೆ ರಾಮ ಮಾತ್ರ.
ಈ ರಾಮನೇ ಅವಳಿಗೆ ಸದಾ ಸಂಗಾತಿ
ಗುಣಗಳ ಒಡೆಯ; ಎದೆಯಾಳುವ ಅವಳ
ಭೂಪತಿ,
ಮರೆತೂ ಕೂಡ ಒಂದು ಚಿಕ್ಕ ಬಿಂದುವಿಗೂ
ಅವನ ಅಗಲಿ ಪಲ್ಲಟವಾಗುವುದಿಲ್ಲ ಈ ಬೆರೆತಿರುವ ಮನ;
ನಲ್ಲನ ಸೇರಿರುವ ಹೃದಯ
ಅವನ ಕಾಣಿಕೆ ಲವಕುಶರನ್ನು
ತನ್ನೊಳಗಿಳಿದ ರಾಮ ಸ್ವರೂಪದ
ತಂದೆತನವನ್ನೂ ನೀಡುತ್ತಾ ಕಾಪಾಡುತ್ತಿದ್ದಾಳೆ
ಒಬ್ಬಂಟಿ ತಾಯಿ ಸೀತೆ.
ವಾಲ್ಮೀಕಿಯಾಶ್ರಮದಲ್ಲಿ ಪುಣ್ಯವತಿಯಾಗಿ
ನೆಲೆ ನಿಂತ ಸೀತೆಯ ಕಣ್ಣು
ತನ್ನ ರಾಮನಿಗಾಗಿಯೇ ಹುಡುಕುತ್ತಿದೆ
ಅವಳ ನಂಬಿಕೆ ಇಷ್ಟೆ-
ಅವನ ಅಂತರರಂಗದಲ್ಲಿ ನೆಲೆ ನಿಂತಿರುವ ನಲ್ಲೆ ನಾನೇ;
ನಾನೊಬ್ಬಳೇ
ನನ್ನ ನಲ್ಲ ಅವನೇ-ಅವನೊಬ್ಬನೇ
ಈ ಸತ್ಯಕ್ಕೆ ಶರಣಾಗಿ ರಾಮ ಮತ್ತೆ ಬಂದೇ ಬರುವನು.
ಕರುಳಕರೆಗೆ ಓಗೊಡದ ರಾಮ ಈ ಭೂಮಿಯ ಮೇಲೆ
ಇರಲು ಸಾಧ್ಯವೇ ಇಲ್ಲ.
ಮತ್ತೆ ನಾ ನೋಡುವ ರಾಮ
ನನ್ನದೇ ಕಂದಗಳ ತಂದೆ ರಾಮ-ಸತ್ಯವ್ರತ ರಾಮ
ಮಾಡಿದ ತಪ್ಪು ತಿದ್ದಿಕೊಂಡು
ವಿಸ್ಮೃತಿಯಿಂದ ಸ್ಮೃತಿಯೆಡೆಗೆ ನಡೆಯುವ ರಾಮ
ನನ್ನ ನಲ್ಲ ರಾಮ. ಅವನು ಮಾತ್ರ ರಾಮ.
--ಜ್ಯೋತಿ ಗುರುಪ್ರಸಾದ್

ಮಂಗಳವಾರ, ಆಗಸ್ಟ್ 9, 2011

ಎತ್ತೆತ್ತಲೂ….


3

ಅನು ಪಾವಂಜೆ ಕವಿತೆ.



ಅನು ಪಾವಂಜೆ
ಇದುವರೆಗೆ
ಸ್ತಭ್ಧವಾಗಿತ್ತು ಸುತ್ತಲು….
ಮತ್ತೆ ಸ್ವಲ್ಪ ಗಾಳಿ
ಬೀಸೋ ಸೂಚನೆ..
ಎಲೆಗಳ ತೊನೆದಾಟ …
ನರ್ತನ…
ಅರಳಿದ ಹೂವಿನ ಕ೦ಪು …
ಇಗಲೂ
ಮೋಡ ಮುಸುಕಿದ
ಕತ್ತಲು….
ಆದರೆ ಚ೦ದದ
ಕತ್ತಲು…
ಕೃಷ್ಣನ ಮೈಬಣ್ಣದ
ಕತ್ತಲು..
ತು೦ತುರು ಹನಿವ
ಕತ್ತಲು…
ಮತ್ತೆ ಹಸಿ ಮಣ್ಣಿನ
ಮೈಯರಳಿಸೋ
ಪರಿಮಳ
ಎತ್ತೆತ್ತಲೂ…

ಎರಡು ಹನಿಗಳು

೧ 
ಒಂದು ರೂಪಾಯಿ 
ಒಂದು ಬೀಜ 
ಆ ಒಂದು ಮಗುವಿನಿಂದಾಗಿ 
ಕ್ಷಮಿಸು 
ನೀನಿಲ್ಲದ ಮೇಲೆಯೂ 
ನಾನು ಕನಸುಗಾರನಾಗಿಯೀ 
ಉಳಿದೆ  
೨ 
ರಾತ್ರಿ ಬರೆದ 
ಸಾವಿನ ಕವನ 
ಹಗಲು ಮುಂದುವರಿಸಿದೆ
ಸುಮ್ಮನೆ ಹಗಲು  ರಾತ್ರಿಗಳು 
 ತದ್ವಿರುದ್ಧ ಅಂದವರಾರು ...

-ಅನಾಮಿಕ 

ಇಂಡಿಯಾ ಮತ್ತು ಈರುಳ್ಳಿ




ನಾನು ಈರುಳ್ಳಿ ಸುಲಿಯುತ್ತಿದ್ದೆ
ಗೆಳೆಯ ಹೇಳುತ್ತಿದ್ದ
ಮುಸ್ಲಿಮರನ್ನು ಮುಗಿಸಬೇಕು
ಒಂದು ಸಿಪ್ಪೆಯ ಸುಲಿದೆ
ಕ್ರೈಸ್ತರನ್ನು ಕಳಿಸಬೇಕು
ಇನ್ನೊಂದು ತೆಗೆದೆ
ಹಿಂದುಳಿದವರನ್ನು ಹಿಮ್ಮೆಟ್ಟಿಸಬೇಕು
ಮತ್ತೊಂದು ತೆಗೆದೆ
ಹೀಗೆ ನಾನು ತೆರೆಯುತ್ತ ಹೋದೆ
ಗೆಳೆಯ ಸುಲಿಯುತ್ತ ಹೋದ

ಕೊನೆಗೆ ಉಳಿದಿದ್ದು
ನನ್ನ ಅವನ ಕಣ್ಣುಗಳಲ್ಲಿ ನೀರು ಮಾತ್ರ
-ರಾಜು ಹೆಗಡೆ

ಬುಧವಾರ, ಆಗಸ್ಟ್ 3, 2011

ರಮಝಾನ್ ಪದ್ಯಗಳು.


ಬಿ .ಎಂ . ಬಷೀರ್


ಇಂದಿನಿಂದ ರಮಝಾನ್. ಇನ್ನು ಒಂದು ತಿಂಗಳು ನನಗೆ ಉಪವಾಸ. ಯಾಕೋ ತಾಯಿಯ ನೆನಪಾಗುತ್ತಾ ಇದೆ. ಅತ್ತಾಳದ ರಾತ್ರಿ(ರಾತ್ರಿ ಸುಮಾರು 4 ಗಂಟೆಗೆ ಎದ್ದು ಉಣ್ಣುವುದನ್ನು ಅತ್ತಾಳ ಎಂದು ಕರೆಯುತ್ತಾರೆ. ಹಾಗೆ ಉಂಡು, ನಮಾಝ್ ಮಾಡಿ ಮಲಗಿದರೆ, ಬಳಿಕ ಮರುದಿನ ರಾತ್ರಿ 7 ಗಂಟೆಯವರೆಗೆ ಹನಿ ನೀರೂ ಕುಡಿಯುವಂತಿಲ್ಲ) ತಾಯಿ ಎದ್ದು ನಮ್ಮನ್ನೆಲ್ಲ ‘ಏಳಿ ಮಕ್ಕಳೇ ಏಳಿ...’ ಎಂದು ಎಬ್ಬಿಸುತ್ತಿದ್ದಳು. ನಾವೋ ಸೋಂಭೇರಿಗಳು. ‘ಏಳಿ ಮಕ್ಕಳೇ...’ ಎಂದು ಕೂಗಿ ಕೂಗಿ ತಾಯಿಯ ಗಂಟಲ ಪಸೆ ಆರಿದ ಬಳಿಕ, ಮೆಲ್ಲಗೆ ಎದ್ದು ಕೂರುತ್ತಿದ್ದೆವು. ನಿದ್ದೆಗಣ್ಣಲ್ಲೇ ಅತ್ತಾಳ ಉಂಡು, ನಿದ್ದೆಗಣ್ಣಲ್ಲೇ ನೋಂಬಿನ ನಿಯತ್ತು ಹೇಳಿ, ಮಲಗಿ ಬಿಡುತ್ತಿದ್ದೆವು. ಈಗ ನಮ್ಮನ್ನು ಎಬ್ಬಿಸುವ ತಾಯಿಯ ದನಿಯೇ ಇಲ್ಲ. ಮೊಬೈಲ್ ಅಲಾರಾಂಗೆ ಎದ್ದು, ತಂಗಿ ಮಾಡಿಟ್ಟ ಅನ್ನ ಉಂಡು, ತಾಯಿಯನ್ನು, ದೇವರನ್ನು ನೆನೆದು ಮಲಗಬೇಕು.
ಬಾಲ್ಯದಲ್ಲಿ ನನ್ನ ಮದರಸದ ಗುರುಗಳು ಹೇಳಿದ್ದು ಈಗಲೂ ನನಗೆ ನೆನಪಿದೆ ‘‘ರಮಝಾನ್ ತಿಂಗಳಲ್ಲಿ ತಿನ್ನುವುದಕ್ಕೆ ಏನೂ ಸಿಗದೇ ಇದ್ದರೆ ಕೆಲವೊಮ್ಮೆ ನಾಯಿಯೂ ಹಸಿದಿರುತ್ತದೆ. ಹಾಗೆಂದು ಅದು ರಮಝಾನ್ ವ್ರತ ಹಿಡಿದಿದೆ ಎಂದು ಹೇಳುವುದಕ್ಕಾಗುತ್ತದೆಯೆ? ರಮಝಾನ್‌ನ ಉಪವಾಸ ನಮ್ಮನ್ನು ಒಳ್ಳೆಯ ಮನುಷ್ಯರಾಗಿ ತಿದ್ದುವುದಕ್ಕೆ ಸಹಾಯವಾಗಬೇಕು. ತಪ್ಪಿ ನೀರು ಕುಡಿದರೆ ನಿಮ್ಮ ಉಪವಾಸಕ್ಕೆ ತೊಂದರೆಯಾಗುವುದಿಲ್ಲ. ಆದರೆ ಇನ್ನೊಬ್ಬರನ್ನು ನೋಯಿಸಿದರೆ, ಕೆಟ್ಟದ್ದನ್ನು ಮಾಡಿದರೆ, ಇನ್ನೊಬ್ಬರಿಗೆ ಬೈದರೆ ಉಪವಾಸ ಮುರಿಯುತ್ತದೆ. ಕೆಟ್ಟದನ್ನು ಮಾಡುತ್ತಾ, ಯೋಚಿಸುತ್ತಾ ನೀವು ಹಸಿದು ಕುಳಿತುಕೊಳ್ಳುವುದು ಸುಮ್ಮನೆ. ರಮಝಾನ್‌ನಲ್ಲಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ. ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ನೆರವು ನೀಡಿ. ಕೆಟ್ಟದ್ದನ್ನು ತಡೆಯಿರಿ. ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲಿ. ರಮಾಝಾನ್‌ನ ಹಸಿವು ನಿಮ್ಮ ವ್ಯಕ್ತಿತ್ವವನ್ನು ಬದಲಿಸಿ, ನಿಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿಸಬೇಕು. ರಮಝಾನ್‌ನಲ್ಲಿ ಸುಮ್ಮನೆ ಹಸಿದು ಕೂರುವುದಕ್ಕೆ ಯಾವ ಅರ್ಥವೂ ಇಲ್ಲ....’’
ಫಕೀರ್ ಮಹಮ್ಮದ್ ಕಟ್ಪಾಡಿಯ ‘ನೋಂಬು’ ಕತೆ ನೆನಪಾಗುತ್ತದೆ. ನಾನು ಓದಿದ ಅತಿ ಒಳ್ಳೆಯ ಕತೆಗಳಲ್ಲಿ ಇದೂ ಒಂದು. ಬಡವರ ಮನೆಯ ಸಣ್ಣ ಹುಡುಗನೊಬ್ಬ ತಂದೆ ತಾಯಿಗಳೊಂದಿಗೆ ಹಟ ಹಿಡಿದು ನೋಂಬು ಹಿಡಿಯುತ್ತಾನೆ. ಸಂಜೆಯ ಹೊತ್ತಿಗೆ ನೋಂಬು ಬಿಟ್ಟ ಬಳಿಕ ತಾಯಿಯೊಂದಿಗೆ ಅಚ್ಚರಿಯಿಂದ ಕೇಳುತ್ತಾನೆ ‘‘ಅರೆ, ನೋಂಬು ಎಂದರೆ ಇಷ್ಟೇಯಾ? ಇದನ್ನು ನಾವು ಆಗಾಗಾ ಹಿಡಿಯುತ್ತಾ ಇರುತ್ತೇವಲ್ಲ...’’ ಹಸಿದು ಕೂರುವುದೇ ನೋಂಬು ಎಂದಾದರೆ ಬಡವರಿಗೆ ವರ್ಷವಿಡೀ ರಮಝಾನ್ ಅಲ್ಲವೆ? ಬಡವರ ಹಸಿವನ್ನು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ರಮಝಾನ್ ನನಗೊಂದು ಅವಕಾಶ ಎಂದು ಭಾವಿಸಿದ್ದೇನೆ. ಅವರು ಪ್ರತಿ ದಿನ ಉಣ್ಣುತ್ತಿರುವ ಹಸಿವಿನ ಒಂದು ತುತ್ತನ್ನು ರಮಝಾನ್ ತಿಂಗಳಲ್ಲಿ ಉಣ್ಣ ಬೇಕು ಎಂದು ತೀರ್ಮಾನಿಸಿದ್ದೇನೆ. ಈ ಬಾರಿಯಾದರೂ ರಮಝಾನ್ ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿಸುತ್ತದೆ ಎಂಬ ನಿರೀಕ್ಷೆಯಲ್ಲಿ, ರಮಝಾನ್ ತಿಂಗಳನ್ನು ಸ್ವಾಗತಿಸಿದ್ದೇನೆ. ನಿಮಗೆಲ್ಲರಿಗೂ ರಮಝಾನ್ ಶುಭಾಶಯಗಳು.
ಕಳೆದ ರಮಝಾನ್ ಹಬ್ಬದ ಸಂದರ್ಭದಲ್ಲಿ ಬರೆದ ಪದ್ಯವೊಂದನ್ನು ನಿಮ್ಮಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ರಮಝಾನ್ ಪದ್ಯಗಳು

ನಾನು ತುಕ್ಕು ಹಿಡಿದ ಕಬ್ಬಿಣ
ಹಸಿವಿನ ಕುಲುಮೆಯಲ್ಲಿ
ಧಗಿಸಿ ಹೊರ ಬಂದಿದ್ದೇನೆ
ಈಗಷ್ಟೇ ಸ್ನಾನ ಮುಗಿಸಿದ
ನವಜಾತ ಶಿಶುವಿನಂತೆ
ಬೆಳಗುತ್ತಿದ್ದೇನೆ

ಮೇಲೊಬ್ಬ ಕಮ್ಮಾರ
ಬಾಗಿದ್ದೇನೆ ಅವನ ಮುಂದೆ
ಉಳುವವನಿಗೆ ನೊಗವೋ
ಮನೆಗೊಂದು ಕಿಟಕಿಯೋ
ಬಾಗಿಲಿಗೆ ಚಿಲಕವೋ, ಬೀಗವೋ
ಅಥವಾ ಧರಿಸುವುದಕ್ಕೆ ಖಡ್ಗವೋ

ಎಲ್ಲಾ ಅವನ ಲೆಕ್ಕಾಚಾರ

2
ನಡು ರಾತ್ರಿ
ಅತ್ತಾಳಕ್ಕೆಂದು ಮಗನ
ಎಬ್ಬಿಸ ಬಂದ ತಾಯಿ
ತಲ್ಲಣಿಸಿ ನಿಂತಿದ್ದಾಳೆ

ಮಗುವಿನ ಗಾಢ ನಿದ್ದೆ
ಅವಳಿಗೆ ಧ್ಯಾನದಂತೆ ಭಾಸವಾಗಿದೆ

3
ರಮಝಾನ್ ದಿನಗಳು
ಅಮ್ಮನ ಕೆನ್ನೆಯ ಓಣಿಗಳಲ್ಲಿ
ಕಣ್ಣ ಹನಿಗಳಾಗಿ
ಉದುರಿ ಹೋಗುತ್ತಿವೆ
ಒಬ್ಬಂಟಿ ಕುಳಿತು

ಜಪಮಣಿಯಂತೆ ಅವಳದನ್ನು ಎಣಿಸುವಳು

4
ನನ್ನ ದ್ವೇಷ
ಹಸಿವಿನ ಬೆಂಕಿಯಲ್ಲಿ ಬೂದಿಯಾಗಿದೆ
ಏನು ಹೇಳಲಿ ಕರುಣಾಳುವಿನ ಕೃಪೆಯ?
ಮಸೀದಿಯಲ್ಲಿ ಕ್ಷಮೆಯ
ಉಡುಗೊರೆಯೊಂದಿಗೆ
ಕಾಯುತ್ತಿದ್ದಾನೆ ಗೆಳೆಯ!

ಗುಜರಿ ಆಯುವ ಹುಡುಗ!




ಬಿ . ಎಂ . ಬಷೀರ

ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ

ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ

ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ

ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ...
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
M ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ

ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ

ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ...

ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ

ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ

ಮಂಗಳವಾರ, ಆಗಸ್ಟ್ 2, 2011

ಒಂದು ದಿನ ಕೆಲವು ಕ್ಷಣ

ನೆನಪಾಗಬಾರದು ಹಿಂದಿನ ಜಗತ್ತು

ಏನೆಂದರೂ ಮುಗಿಯದವಳು,,,,!



ಕಡಲ ಮುತ್ತಿನಂಥವಳು

ಕಡಲಾಗಿ ಸೆಳೆವವಳು

ಅಬ್ಬರದ ಅಲೆಗಳು

ನನ್ನೊಳಗಿನವಳು!


ಕನಸಿನ

ಕನಸಿವಳು

ಕನವರಿಕೆಯಾದವಳು

ಎಂದೂ ಕಾಣದವಳು

ಕೋಲ್ಮಿಂಚಿನಂಥವಳು

ನನ್ನಂತರಾಳ

ನನ್ನರುಳು-ಮರುಳು!


ಚಂದ್ರಮುಖಿಯಂಥವಳು

ಚಂದ್ರನ

ನೆನೆವವಳು

ಚಂದ್ರಸಖಿ

ನನ್ನೊಲುಮೆಯ

ಬಾಳಬೆಳದಿಂಗಳು!
ಮಾಸದ ನಗುವಿವಳು
ಮಧುಮಾಸದವಳು
ಕಲ್ಲುಸಕ್ಕರೆ
ಸವಿರುಚಿಯಂಥವಳು
ಕಾಮನಬಿಲ್ಲು!




ನನ್ನವಳು


ಏನೆಂದರೂ ಮುಗಿಯದವಳು,,,,,!

-ಮಂಜು