ಸೋಮವಾರ, ಜೂನ್ 20, 2011

ಚಳಿಗಾಲದ ಎಲೆ ಸಾಲು'' ಕವನ ಸಂಕಲನ ಬಿಡುಗಡೆ


chaligala cover page.jpg

ಎಸ್.ಕುಮಾರ್ ಎರಡು ಕವಿತೆಗಳು


ಎಸ್ ಕುಮಾರ್ ಅವರ ಪ್ರಥಮ ಸಂಕಲನ ಚಳಿಗಾಲದ ಎಲೆ ಸಾಲು ಬರುತ್ತಿರುವ ಸಂದರ್ಭದಲ್ಲಿ ಸಂಕಲನದ ಎರಡು ಕವಿತೆಗಳು ನಿಮಗಾಗಿ


ಸಂಜೆಗತ್ತಲ ಹಾಡು

ನೆರಳು ಬಿಡಿಸಿಕೊಂಡಾಗಿದೆ
ಕನಸುಗಳ ಮಾತೆಲ್ಲಿ?
ಮಾತು ತರಗೆಲೆ
ಹಿಡಿದು ಪ್ರಯೋಜನವಿಲ್ಲದೆಯೆ
ಪಾಲೋ ಕಾವೋ, ಖಲೀಲ್ ಗಿಬ್ರಾನ್
ಕಡೆಗೆ…
ರಾಬಿನ್ ಶಮರ್ಾನ
ಫೆರಾರಿ ಕೂಡ
ಬೀದಿ ದೀಪದ ಸಾಲಿನಲ್ಲಿ…

ಸಿಗರೇಟಿನ ಬೂದಿ ಜತೆ
ಕೊಡವಿದರೆ ಬೇಸರ ಬೀದಿಗೆ
ಸಿಗ್ನಲ್ಲಿನ ಕೆಂಪು ದೀಪ
ದಾರಿಗೆ!

ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು…

ರಾತ್ರೋರಾತ್ರಿ
ಕಂಪ್ಯೂಟರ್ ಪರದೆ
-ಯಿಂದ
ಎದ್ದು ಬಂದ
ಯಾರದ್ದೋ ಫ್ರೆಂಡ್ ರಿಕ್ವೆಸ್ಟ್…
ಈ ಮೇಲು
ಫೀಮೇಲು
ಆಮೇಲಾಮೇಲೆ
ಮೇಲೆ.. ಮೇಲೆ..
ಲೆ…
ಲೆ…
ಎಂದ ಮೇಷ್ಟ್ರು ಕೂಡ
ಕಣ್ಣ ಮುಂದೆ..
*
ಲಜ್ಜೆಗೇಡಿ ಸಂಜೆ
ಬೇಡದ ಚಿತ್ರಗಳು
ಯಾರದ್ದೋ ಪುಳಕದ ನಗು
ಮೂಲೆಯಲ್ಲಿ ಸೆಳಕಿನ ಬಿಗು
ಮನೆ ದಾರಿಯಲ್ಲಿ

ಧ್ಯಾನ ಮೌನ
ಬುದ್ಧ, ತಾವೋ..
ಮೂರು ಮುಕ್ಕಾಲು ಕೋಟಿ
ದೇವರುಗಳೆಲ್ಲಾ
ಊರು ದಾರಿಯಲ್ಲಿ

ಒಳಗೊಳಗೆ ಒದ್ದಾಟ
ಸುಖಾಸುಮ್ಮನೆ ಸಂಕಟ

ಕಂಡರೆ ಕೈ ಮುಗಿಯಿರಿ…

ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ
ಅವನಿಗೂ ಕಾಡುತ್ತಿರಬಹುದು ಪಾಪಪ್ರಜ್ಞೆ.

ಗರ್ಭಗುಡಿ ಮಂದ ಬೆಳಕು,
ಸೂತಕದ ಮನೆ ಹಣತೆಯ ಹಾಗೆ
ಕಂಡಿದೆಯಂತೆ ಅವಗೆ

ಕಣ್ಣುಜ್ಜಿಕೊಂಡಾಗಲೆಲ್ಲ
ಗಪ್ಪನಡುರುವ ರಕ್ತದ ವಾಸನೆ
ಮೂಗಿಗೆ ಮಾತ್ರವಲ್ಲ!

ಭಕ್ತರು ನೂರು ಮಂದಿ
ನೆರೆದು ನಿಂತರೆ
ತತ್ತರಿಸಿ ದುಃಸ್ವಪ್ನ
ಕಂಡಂತೆ ನಡುಗು

ಊರ ಬೀರನು, ಸಾಬರ ಪೀರನು
ಕೂಡಿ ಆಡುತ್ತಿದ್ದರೆ,
ದೇಗುಲದ ಕಟ್ಟೆ ಮೇಲೆ
ಅವನು ಅನಾಥ

ಗಂಟೆ ನಾದ ಮೀರಿದೆ
ಮದ್ದು ಗುಂಡುಗಳ ಸದ್ದು,
ಶಂಖನಾದ ಸೀಳಿದ ಆಕ್ರಂದನ,
ಗುಡಿಯ ಒಳಗೆಲ್ಲಾ ಮಾರ್ದನಿಸಿ ಆಕ್ರೋಶ

*
ಅಮಲುಗತ್ತಲು, ಬರೀ ಮಂತ್ರಗಳು
ಏನೂ ಕೇಳದೆ,
ಜಗದಲ್ಲೇನುಗುತ್ತದೆ ತಿಳಿಯದೆ
ಮೂಡನಾಗಿಹನೆಂದು ಊರಾಚೆ
ಬೆಟ್ಟದ ಮೇಲೆ ಕೂತಿಹನಂತೆ…
ಕಂಡರೆ ಕೈ ಮುಗಿದು
ಅಲ್ಲಿಂದಲೂ ಕಳಿಸಿಕೊಟ್ಟು ಬಿಡಿ..

ಶುಕ್ರವಾರ, ಜೂನ್ 10, 2011

ಹನಿ


ನಗುವ ನಿನ್ನ
ತುಟಿಗಳಲಿ
ಈ ರಾತ್ರಿ 
ಕತ್ತಲು ತುಂಬಿಕೊಳ್ಳುತ 
ನಡೆದರೆನಾಯ್ತು ಬಿಡು 
ಕತ್ತಲಲ್ಲಿ 
ಇರುಳ ಹುಡುಗಿಗೂ 
ಬೆಳಕಿನ ಗರ್ಭ 
ಕಟ್ಟುವುದು ..!  

 

ಭಾನುವಾರ, ಜೂನ್ 5, 2011

೨೦೧೧ ರ ವಿಭಾ ಸಾಹಿತ್ಯ ಪ್ರಶಸ್ತಿಗಾಗಿ ಕವನಗಳ ಆಹ್ವಾನ




PÀ£ÀßqÀ PÀªÀAiÀÄwæ «¨sÁ CªÀgÀ £É£À¦£À°è '«¨sÁ ¸Á»vÀå ¥Àæ±À¹Û-2011' PÁÌV PÀ£ÀßqÀzÀ PÀ«UÀ½AzÀ ªÀÄƪÀvÀÛPÀÆÌ ºÉZÀÄÑ PÀ«vÉUÀ½gÀĪÀ ºÀ¸ÀÛ¥ÀæwAiÀÄ£ÀÄß DºÁ餸À¯ÁVzÉ. F ¥Àæ±À¹ÛAiÀÄÄ gÀÆ. 5000/- £ÀUÀzÀÄ ªÀÄvÀÄÛ ¥Àæ±À¹Û ¥sÀ®PÀªÀ£ÀÄß M¼ÀUÉÆArzÉ. AiÀiÁªÀÅzÉà PÁgÀtPÀÆÌ ºÀ¸ÀÛ¥ÀæwAiÀÄ£ÀÄß »AwgÀÄV¸À¯ÁUÀĪÀ¢®è. ¥Àæ±À¹Û «eÉÃvÀ ºÀ¸ÀÛ¥ÀæwAiÀÄ£ÀÄß UÀzÀUÀzÀ ®qÁ¬Ä ¥ÀæPÁ±À£À¢AzÀ ¥ÀæPÀn¸À¯ÁUÀĪÀzÀÄ. ºÀ¸ÀÛ¥Àæw PÀ¼ÀÄ»¸À®Ä PÉÆ£ÉAiÀÄ ¢£ÁAPÀ; dįÉÊ 25.


«¼Á¸À:
¸ÀÄ£ÀAzÁ ªÀÄvÀÄÛ ¥ÀæPÁ±À PÀqÀªÉÄ,
90, £ÁUÀ¸ÀÄzsÉ, 6/©, PÁ½zÁ¸À£ÀUÀgÀ.
«zÁå£ÀUÀgÀ «¸ÀÛgÀuÉ, ºÀħâ½î-580031
¸É¯ï: 9845779387

ಶನಿವಾರ, ಜೂನ್ 4, 2011

ಕವಿತೆ


ಹೇಮಾ ವೆಂಕಟ್








 
ಒಂದು ಹನಿ ರಕ್ತ
ಈ ಸಲ ನಾನು ಹೋದಾಗ
’ಆನಾ’ ಯೆನಿಸೆಯ್ ನದಿಯ ತಟದಲ್ಲಿ
ಧ್ಯಾನಸ್ಥಳಾಗಿದ್ದಳು
ಆಕೆ ಮತ್ತೆ ಎಚ್ಚರವಾಗುವಾಗ
ಸೂರ್ಯ ಇನ್ನಷ್ಟು ಕೆಂಪಾಗಿದ್ದ.
ಅವನ ಒಡಲಲ್ಲೂ ಅದೇ ಸೊಲ್ಲು
ಅಲ್ಲಿ ಜೀವಂತ ಹೆಣಗಳನ್ನು ತೇಲಿಬಿಟ್ಟಿದ್ದಾರೆ
ಆನಾಳಿಗೆ ಬರೇ ವಿದಾಯ ಹೇಳುವುದೇ ಬದುಕಾಗಿದೆ
ಮನೆಯಲ್ಲಿ ಆಕೆಗಾಗಿ ಕಾದ ನಲ್ಲ
ಸಿಟ್ಟು ಮಾಡಿಕೊಂಡು ವಿದಾಯ ಹೇಳಿದ್ದ
ಹೀಗೆ ಹೋದವರಲ್ಲಿ ಈತ ನಾಲ್ಕನೆಯವ!
ನನಗದು ಅರ್ಥವಾಗಿತ್ತು
ಆನಾಳ ಮನಸು ಯಾವುದಕ್ಕೂ ತಲ್ಲಣಿಸುತ್ತಿಲ್ಲ
ಅವರನ್ನು ಬಿಟ್ಟು
ಆ ಬೀದಿಯ ಅಂಚಿನಲ್ಲಿ
ಕೃಶಗೊಂಡ ಜೀವವೊಂದು
ಸುಮ್ಮನೆ ಚಲಿಸಿದಂತೆ ಭಾಸವಾಗುತ್ತಿದೆ
ಅಷ್ಟೇ ಸಾಕು ಅವರೆಲ್ಲ ಚುರುಕಾಗುತ್ತಾರೆ
ಕೈಚೀಲದಿಂದ ಚಿಂದಿ ಚಿಂದಿ ಕಾಗದಗಳು
ಹೊರಬರುತ್ತವೆ
ಮುಗಿಲೂ ಸ್ತಬ್ಧ ಒಂದು ಕ್ಷಣ
ಆನಾ ಹೇಳುತ್ತಾಳೆ,
ನಿಮಗೆ ಕೊಡಲು ನನ್ನಲ್ಲಿ ಏನೂ ಇಲ್ಲ
ಅವರು ಹೇಳುತ್ತಾರೆ,
ಕವಿತೆ ಕೊಡು ಬೇರೇನೂ ಬೇಡ
ಅವರು ಕವಿತೆಯನ್ನು
ಪ್ರಸಾದದಂತೆ ಕಣ್ಣಿಗೆ ಒತ್ತಿಕೊಂಡು
ಕುಡಿಯುತ್ತಾರೆ
ಹಾಸಿ ಹೊದೆಯುತ್ತಾರೆ
ಕೆಲವರಿಗೆ ನೆಮ್ಮದಿಯ ಸಾವು
ಇನ್ನು ಕೆಲವರಿಗೆ ದಿನದಿನದ ಕಾವು
ಆನಾ ಕವಿತೆ,
ಸಾಮ್ರಾಜ್ಯದ ಬಾಯಿಗೆ ಬೀಗ
ಬಂಧನದ ಸರಪಳಿಗೆ ಕೀಲಿಕೈ
ಸಾವಿನ ಮನೆಗೆ ಸಾಂತ್ವನಗೀತೆ
***
ಈ ಸಲ ನಾನು ಸುಮ್ಮನೆ ಬರಲಿಲ್ಲ
ನಿನ್ನ ಲೇಖನಿಯ ಹನಿ ಶಾಯಿ ಬೇಕು ಎಂದೆ
ಆಕೆ ಒಂದು ಹನಿ ರಕ್ತ ಕೊಟ್ಟಳು
ನನ್ನ ಕವಿತೆಗಳಿಗೆ ಜೀವದಾನ







ಶುಕ್ರವಾರ, ಜೂನ್ 3, 2011

ನಾವು ಕಂಡೇ ಕಾಣುತ್ತೇವೆ…

ಫೈಜ್ ಅಹ್ಮದ್ ಫೈಜ್ ಕವಿತೆ


ಕನ್ನಡಕ್ಕೆ: ದಿಲ್


ಕಾಲದ ಅನಂತತೆಯ ಸ್ಲೇಟಿನ ಮೇಲೆ

ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ

ನಾವು ಕಂಡೇ ಕಾಣುತ್ತೇವೆ…


ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ

ರೌದಿಯಾಗಿ ಹಾರಾಡುವುದನ್ನು,

ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು

ನಾವು ಕಂಡೇ ಕಾಣುತ್ತೇವೆ…



ಎಲ್ಲ ಕಿರೀಟಗಳು, ಮುಕುಟಮಣಿಗಳು ಕಿತ್ತೆಸೆಯಲ್ಪಡುವುದನ್ನು,

ದರ್ಪದ ಸಿಂಹಾಸನಗಳೆಲ್ಲ ಸಮಾಧಿ ಸೇರುವುದನ್ನು

ನಾವು ಕಂಡೇ ಕಾಣುತ್ತೇವೆ…



ಸುಳ್ಳಾಡುವ ಮುಸುಡಿಗಳು ಮರೆಯಾಗಿ

ನಮ್ಮಂಥ ನಿರ್ಲಕ್ಷಿತ ಜೀವಂತ ಮುಖಗಳು

ನಿರಾಕರಿಸಲ್ಪಟ್ಟ ಗದ್ದುಗೆಗಳನೇರುವುದನ್ನು

ನಾವು ಕಂಡೇ ಕಾಣುತ್ತೇವೆ…



ನಾನೂ ಇರುವೆನಿಲ್ಲಿ, ನೀವೂ ಇರುವಿರಿ

ಇದೆಲ್ಲ ನಿಜವಾಗುವುದನ್ನು

ನಾವು ಕಂಡೇ ಕಾಣುತ್ತೇವೆ…

ಗುರುವಾರ, ಜೂನ್ 2, 2011

Don't Come back

Ahmed Faraz poem




Don't come back if

You think it is to fulfill a promise.

People with obligations are

either compelled or

simply exhausted.

Go and fulfill others' desires

And fall in love with other women.

I will not call you.

But when you burn inside

with the blaze of wanting me,

needing me,

and your heart weeps,

you can then

come back to me.


-Ahmed Faraz