ಮಂಗಳವಾರ, ಏಪ್ರಿಲ್ 12, 2011

ಎರಡು ಕವಿತೆ

 

ನನ್ನಿಂದ
ಈ ಜಗಕೆ 
ಏನೆಲ್ಲಾ ಆಗಿದೆಂದು 
ಬ್ರಮೆ ತುಂಬಬೇಡ ಲೋಕವೇ 
ನಾನು 
ಪಾಠ ಕಲಿತದ್ದೆಲ್ಲ 
ಹಣತೆಯಿಂದ 
ತಾನು ಉರಿಯುವ ಹೊತ್ತು 
ಜತೆಗಿರುವ ಹಣತೆಗಳ  
ಬೆಳಗಿಸಲದು ಎಂದೂ 
ನಿರಾಕರಿಸದು 
ಇಷ್ಟಾಗಿಯೂ ಹಣತೆಗಿರದ 
ಬ್ರಮೆ 
ನನ್ನ ತಲೆಗೇಕೆ
ತುಂಬುತಿರುವೆ ಲೋಕವೆ?

೨ 

ನನ್ನ ಕವಿತೆ 
ಎಲ್ಲವೂ ಆಗಿದೆ 
ಅದು ನನ್ನ ಹುಟ್ಟು 
ಮತ್ತು ಸಾವು 
ಅದು ನನ್ನ ಸ್ವರ್ಗ 
ಮತ್ತು ನರಕ 
ಅದು ನನ್ನ ಆಪ್ತ ಗೆಳತಿ 
ಮತ್ತು ಕೊಲೆಗಾರ್ತಿ 
ಅದು ನನ್ನ ಬಾಯಾರಿಕೆ 
ಮತ್ತು ನನ್ನ ರಕ್ತ ಕುಡಿದು ತಣಿಯುವ ನಗು 
ಅದು ನನ್ನ ಅಕ್ಸೋಣಿ ಮೈಲುಗಳ ಬೆಳಕು 
ಮತ್ತು ಕತ್ತಲೆ 
ಅದಿಲ್ಲದೆ ನಾನು
ಬದುಕಿರಲಾರೆನಷ್ಟೆ
      -ಅನಾಮಿಕ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ