ಶುಕ್ರವಾರ, ಮೇ 6, 2011

ಹೈಕುಗಳು.

ರಾಘವೇಂದ್ರ ಮಹಾಬಲೇಶ್ವರ 

ತಾನೇ ಜೀವತುಂಬಿ ಕಳಿಸಿದವು
ತನ್ನ ಪಾದಕ್ಕೇ ಬಿದ್ದಾಗ ಅಂದುಕೊಳ್ಳುತ್ತಾನೆ
ದುರಾಸೆಯವರು, ಹೂಗಳನ್ನೂ ಕೊಲ್ಲುತ್ತಾರೆ.

ರಾಧೆಯ ಎದೆ ನೋಡಿ
ಕೃಷ್ಣನೊಳಗಿದ್ದ ಬೆಣ್ಣೆ ಕಳ್ಳ
ಎದ್ದ.

ಆಗಸದಲ್ಲಿ ಹಾರುತ್ತಿರುವ ಹದ್ದು
ನೀರಲ್ಲಿ ತೇಲುವ ಮೀನೊಡನೆ ಕಣ್ಣು ಬೆರೆಸುತ್ತಿದೆ
ಯಾವುದೋ ಸಂಬಂಧ ನೆನಪಾದಂತೆ.

ಅವಳೆದೆ ಮೇಲೆ ಬಿಸಿಲುಕೋಲು ಬಿದ್ದಿದೆ
ಅವಳು ಕೋಪದಿಂದ ದಿಟ್ಟಿಸುತ್ತಿದ್ದಾಳೆ
ಅವನ ಕಂಗಳಿಗೆ ಅದರ ಪರಿವೆಯಿಲ್ಲ.

ಸುರಗಿಯ ಕಂಪು
ಇಬ್ಬರ ಮೈ ಮರೆಸಿತು
ಮನ ಬೆರೆಸಿತು.

ಮೊಲೆಗಳು ಮೊಲಗಳಲ್ಲ
ಮನಬಂದಂತೆ ಕುಪ್ಪಳಿಸಲು
ಒಂದನ್ನು ಮರೆತು ಇನ್ನೊಂದು ಓಡಲು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ