ಗುರುವಾರ, ಮೇ 26, 2011

ಅವಳು-ಅವನು





ಅವಳು
ಭಾರವಾಗಿ ಕೂತಿದ್ದಾಳೆ
ಮಕ್ಕಳು ಓದುತ್ತ
 ಆಡುತ್ತಿದ್ದಾರೆ
ಒಳಗೆ
ಹೊರಗೆ
ದಿನ
ಪತ್ರಿಕೆಯ
ಕುಡಿಯುತ್ತ
ಕೂತಿದ್ದಾನೆ
ಅವನು ಖುರ್ಚಿಯಲ್ಲಿ

-

ಅಡಿಗೆ
ಮನೆಯಲ್ಲಿ
ಕುಕ್ಕರು ಸೀಟಿ ಹೊಡೆಯುತ್ತಿದೆ
ಒಂದು ಎರಡು ಮೂರು
ಕುದಿಯುವ ಸಾರು
ಪ್ರಿಜ್ಜಿನಲ್ಲಿಡಬೇಕು
ಆರಿದ   ಮೇಲೆ
ಬದುಕು


-

ಬಹುಶ ಅವಳಿಗೆ ಗೊತ್ತಿಲ್ಲ
ದೂರದಲ್ಲಿರುವ ಆವನು
ಅವಳ ಜತೆ
ಚಕ್ಕಂದವಾಡುತ್ತಿರುವುದು

    -ರಾಜು ಹೆಗಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ