ಮಂಗಳವಾರ, ಏಪ್ರಿಲ್ 5, 2011

ಒಂದಷ್ಟು ಕವಿತೆಗಳು 


ಇದು ಆಣೆ 
ಪ್ರಮಾಣ ಮಾಡಿ 
ಹೇಳುವ ಮಾತಲ್ಲ 
ಮೊಲೆ ಜೋತುಬೀಳುವ ಹೊತ್ತು 
ಎದೆಯೊಳಗೆ ಹಾಗೆ ಉಳಿದ 
ಭಾವಗಳಿಗೆ 
ಈ ಸಂಜೆಯೊಂದೇ ಸಾಕ್ಷಿ 
ಇದು ಪ್ರೇಮ ಕಾಯಕಟ್ಟುವ
ಹೊತ್ತಲ್ಲವೆಂದು ನಾಲಿಗೆ 
ಕಳ್ಕೊಂಡವಳೇ 
ಸಮಾದಿ ಕಲ್ಲಿನ ಅಕ್ಷರಗಳಾಗುವುದು 
ಕೆಲವು ಸಂಗತಿಗಳಷ್ಟೇ
ಮೀನಿಗೆ ಬೇರೆ
ಬದುಕಿಲ್ಲ
ನೀರ ಹೊರತು ಎಂಬುದಷ್ಟೇ
ನಿಂತುಹೋಗುವ ಉಸಿರಿನ
ಕೊನೆಯ ಮಾತಾಗಿ
ಉಳಿಯಲಿ
ಬೇಕಿದ್ದರೆ ನೀ ಎದೆಬಗೆದು 
ರಕ್ತ ಕುಡಿ
ನಿನ್ನ ಗಾಯದ ಗುರುತು ಹೊತ್ತು
ಉಸಿರಾಡಲಾರೆ


ನಿನ್ನ ಮುಟ್ಟಲಾರೆನೆಂಬುದು 
ನನಗೆ ಗೊತ್ತು 
ನಿನ್ನ ಕಾಣಲಾರೆನೆಂಬುದೂ 
ನನಗೆ ಗೊತ್ತು 
ಅಷ್ಟೇಕೆ 
ನಿನ್ನ ಮಾತು 
ಕೇಳಲಾರೆನೆನ್ನುವುದು 
ಖಚಿತವೆನಿಸಿದೆ 
ಇಷ್ಟೆಲ್ಲಾ  ಗೊತಿದ್ದವನಿಗೆ 
ಗೊತ್ತಾಗಲಾರದ 
ವಿಷಯ ಒಂದಿದೆ :
ಉರುಳುವ ಪ್ರತಿ 
ಕ್ಷಣ ನಿನ್ನ ಮೇಲಿನ 
ಪ್ರೀತಿಯನ್ನು ಹೆಚ್ಚಿಸುತ್ತಿದೆಯೆಲ್ಲ 
ಯಾಕೆ? 
೩ 
ಪವಾಡದ 
ಸಂಗತಿಯೆಂದರೆ 
ನಿನ್ನ ಸ್ಪರ್ಶಕ್ಕೆ 
ಕೊರಡು ಕೊನರುವುದು 
ಮಹಾಪವಾಡದ
 ಸಂಗತಿಯೆಂದರೆ 
ನೀನು ಸ್ಪರ್ಶಿಸದೆಹೋದರೆ 
ಕೊರಡು ಹಾಗೆ 
ಇರುವುದು  ....
        - ಅನಾಮಿಕ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ