ಸೋಮವಾರ, ಏಪ್ರಿಲ್ 18, 2011

ಹನಿಗಳು


ದೀಪವಾರಿದ 
ಮೇಲಷ್ಟೇ 
ಬೆಳಕ ಕಂಡ ಹಾಗೆ 
ನೀನು 
ಮಾತು ನಿಲ್ಲಿಸಿದ ಮೇಲೆ 
ನಮ್ಮ ಸಂಬಂಧ 
ಸುಧಾರಿಸಿತು  

೨ 

ಪ್ರೀತಿ 
ಸತ್ತುಹೋಯಿತೆಂದು
ನಿಸೂರಾಗಿ
ಕನ್ನಡಿಯೆದುರು
ನಿಂತುಕೊಂಡೆ
ನನ್ನೊಳಗಿನ ಮನುಷ್ಯ
ಸತ್ತಿರುವುದಷ್ಟೇ
ಕಂಡಿತು


ಬೆಳಕು ಎಂದರೆ
ಬೇರೇನಲ್ಲ
ನಿನ್ನ  ಹೃದಯದಲ್ಲಿ
ನನ್ನ ಹೆಸರು
ಮೂಡಿದ ಕ್ಷಣವಷ್ಟೇ
ಕತ್ತಲನ್ನೂ ವ್ಯಾಖ್ಯಾನಿಸು
ಎಂದರೆ ಏನು ಹೇಳಲಿ ?
ನನ್ನ ಹೆಸರು
ನಿನ್ನ ಹೃದಯದಿಂದ 
ಅಳಿಸಿಹೋಗುವ ಹೊತ್ತಷ್ಟೆ...



ನಾವು
ಮಾತನಾಡುತ್ತಿಲ್ಲವೆಂಬುದು
ನಿಜಕ್ಕೂ
ಬೇಸರದ ಸಂಗತಿ
ಆದರೆ ವಾಸ್ತವ
ಹೀಗಿದೆಯಲ್ಲ
ನಾವು ಮಾತನಾಡಲು
ಆರಂಬಿಸುವ ತನಕ
ನಮ್ಮ ಸಂಬಂಧ
ನಲುಗದೆ ಉಳಿಯುವುದು ....

                   -ಅನಾಮಿಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ