ಹಾಯ್ಕುಗಳು
೧
ಸಂಜೆಯಾದೆಂತೆಲ್ಲ
ಬೆಳೆಯುವುದು
ಕತ್ತಲಾಗಸದಲ್ಲಿ
ಕನಸಿನ ಕೌದಿ
೨
ಹಗಲೆಲ್ಲ
ಬೆಳಕಾದವನು
ಕೊನೆಗೆ ಉಳಿಸಿಹೋದನು
ಕತ್ತಲನ್ನೇ
೩
ಮೂಲೆ ಸೇರಿದ ಹಣತೆ
ಮೊಗಸಾಲೆಗೆ ಬಂದು
ಹೊತ್ತಿ ಉರಿಯುವಾಗ
ವಂದಿಸಿತು ಕತ್ತಲೆಗೆ
- ಅನಾಮಿಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ