ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ
ನಾವು ಕಂಡೇ ಕಾಣುತ್ತೇವೆ...
ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ
ರೌದಿಯಾಗಿ ಹಾರಾಡುವುದನ್ನು,
ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು
ನಾವು ಕಂಡೇ ಕಾಣುತ್ತೇವೆ...
ಎಲ್ಲ ಕಿರೀಟಗಳು, ಮುಕುಟಮಣಿಗಳು ಕಿತ್ತೆಸೆಯಲ್ಪಡುವುದನ್ನು,
ದರ್ಪದ ಸಿಂಹಾಸನಗಳೆಲ್ಲ ಸಮಾಧಿ ಸೇರುವುದನ್ನು
ನಾವು ಕಂಡೇ ಕಾಣುತ್ತೇವೆ...
ಸುಳ್ಳಾಡುವ ಮುಸುಡಿಗಳು ಮರೆಯಾಗಿ
ನಮ್ಮಂಥ ನಿರ್ಲಕ್ಷಿತ ಜೀವಂತ ಮುಖಗಳು
ನಿರಾಕರಿಸಲ್ಪಟ್ಟ ಗದ್ದುಗೆಗಳನೇರುವುದನ್ನು
ನಾವು ಕಂಡೇ ಕಾಣುತ್ತೇವೆ...
ನಾನೂ ಇರುವೆನಿಲ್ಲಿ, ನೀವೂ ಇರುವಿರಿ
ಇದೆಲ್ಲ ನಿಜವಾಗುವುದನ್ನು
ನಾವು ಕಂಡೇ ಕಾಣುತ್ತೇವೆ...
ಮೂಲ: ಫೈಜ್ ಅಹ್ಮದ್ ಫೈಜ್
ಕನ್ನಡಕ್ಕೆ: ದಿಲ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ